This song is written by my mother in the glory of Lord Shiva. You can sing during performing arathi to Lord Shiva during Shivarathri.
ಶಿವನ ಮಹಾತ್ಮೆ ಹಾಡು
ಜಯತು ಜಯತು ಶ್ರೀಮಹಾದೇವಾ ಪರಮೇಶ್ವರ ದೇವಾ ಪರಮೇಶ್ವರ ।।ಪ।।
ಜಗವ ಸುಡುವ ವಿಷವನು ಕುಡಿದು
ಕಂಠದಲ್ಲಿರಿಸಿದ ದೇವಾ ನೀಲಕಂಠನೆ ದೇವಾ ನೀಲಕಂಠನೆ ।।೧।।
ಗೆದೆಯಬಂದ ಮನ್ಮಥನನ್ನು
ಹಿಡಿ ಬೂದಿ ಮಾಡಿದ ದೇವಾ ನಿಟಿಲ ನೇತ್ರನೇ
ದೇವಾ ನಿಟಿಲನೇತ್ರನೆ ।।೨।।
ಪರಮಯೋಗಿನಿ ಗಿರಿಜಾತೆಯನು
ವರಿಸಿದಂಥಾ ಜಗದೀಶಾ ಗೌರೀಶಂಕರ ।।೩।।
ಭಕ್ತ ಮಾರ್ಕಾಂಡೆಯನ ಎಳೆಯಬಂದ
ಕಾಲನನು ತಡೆದು ಕೃಪೆದೋರಿದ ಶಿವನೇ ಕಾಲಕಾಲನೆ
ಶಿವನೇ ಕಾಲಕಾಲನೆ ।।೪।।
ಭರದಿ ಬೀಳ್ವ ಸುರನದಿಯನ್ನು
ಜಟೆಯಲ್ಲಿ ಸುತ್ತಿದ ಹರನೇ ಗಂಗಾಧರ
ಹರನೇ ಗಂಗಾಧರ ।।೫।।
ಶಾಪ ಮುಕ್ತನ ಮಾಡಿ ಶಶಿಯನ್ನು
ಮುಂಗುರುಳಿನಲ್ಲಿರಿಸಿದ ದೇವಾ ಚಂದ್ರಶೇಖರ
ದೇವಾ ಚಂದ್ರಶೇಖರ ।।೬।।
ನಿನ್ನ ಮಹಿಮೆಯ ಅರಿತವರಿಲ್ಲ
ಮೊರೆಹೋದ ಪಾಮರರನ್ನು ಪೊರೆಯೋ
ಕರುಣಾಕರ
ಪೊರೆಯೋ ಶಂಭು ಶಂಕರ ।।೭।।
Har Har Mahadev!
Hello Shantha,
Beautiful song. It requires real Bhakti to carve out such a song!
Thank you so much, Lalitha. Means a lot. Will pass this message to my mother.