This prayer was chanted by Chandrahasa to goddess Parvathi/Chamundi/Amba/Gowri. Extracted from the Gemini bharatha.
ಚಂದ್ರಹಾಸನ ಪ್ರಾರ್ಥನೆ – ಜೈಮಿನಿ ಭಾರತ
ತಾಯೆ ಪಾರ್ವತಿ ಪರಮ ಕಲ್ಯಾಣಿ ಶಂಕರ
ಪ್ರೀಯೆ ಸರ್ವೆಶ್ವರಿ ಜಗನ್ಮಾತೆ ಸನ್ನುತ
ಚ್ಚಾಯೆ ಸಾವಿತ್ರಿ ಶಾರದೆ ಸಕಲ ಶಕ್ತಿರೂಪಿಣಿ ಕಾಳಿ ಕಾತ್ಯಾಯಿನಿ ।
ಶ್ರೀಯೆ ವೈಷ್ಣವಿ ವರದೆ ಚಂಡಿ ಚಾಮುಂಡಿ ನಿರ
ಪಾಯೆ ನಿಗಮಾಗಮಾರ್ಚಿತೆ ಮಂತ್ರಮಯಿ ಮಹಾ
ಮಾಯೆ ಎನ್ನ ರಕ್ಷಿಪುದೆಂದು ಕೈಮುಗಿದು ಚಂದ್ರಹಾಸಂ ಬೇಡಿಕೊಳುತಿರ್ದನು ।।೧।।
ಹರಿಯ ವಕ್ಷಸ್ಥಲವನಜನ ವದನಾಬ್ಜಮಂ
ಗಿರಿಶನ ಕಳೇಬರಾರ್ಧವನಿಂಬುಗೊಂಡೆಸವ
ಪರಮ ಕಲ್ಯಾಣಿ ಕಾಲತ್ರಯ ದುಪಾಸ್ತಿಗಧಿದೇವಿ ಗಾಯತ್ರಿ ವರದೇ
ಗರುಡವಾಹನೆ ಹಂಸಗಮನೆ ವೃಷಭರೂಡೆ
ನಿರುಪಮ ಫಲಪ್ರದಾಯಿನಿ ಪುಣ್ಯಮಯಿ ಸಕಲ
ದುರಿತಹರೆ ಎನ್ನನುದ್ಧರಿಸೆಂದು ಚಂದ್ರಹಾಸಂ ಬೇಡಿಕೊಳುತಿರ್ದನು ।।೨।।