Hire Gowri Pooja – Dodda Gowri Pooja – Gowri Hunnime

Hire Gowri

Hire Gowri Pooja also known as Dodda Gowri Pooja and Gowri Hunnime is celebrated with devotion in North Karnataka. Below is the write up by my mother on this festival in Kannada script.  This festival falls in the Hindu month of Karthika, October – November of the Gregorian calendar.

For the festival date click here.

ದೊಡ್ಡ ಗೌರೀ ಹುಣ್ಣಿಮೆ

ಕಾರ್ತಿಕ ಮಾಸದಲ್ಲಿ ಬರುವ ಪೌರ್ಣಮಿಗೆ ಗೌರಿ ಹುಣ್ಣಿಮೆ ಎನ್ನುವರು. ಉತ್ತರ ಕರ್ನಾಟಕದಲ್ಲಿ ಗೌರಿ ಹುಣ್ಣಿಮೆ ತುಂಬ ಪ್ರಚಲಿತ ವಾಗಿದೆ. ಕಾರ್ತಿಕ ಶುಧ್ಧ ನವಮಿಯಂದು ಗೌರಿಯನ್ನು ಸ್ಥಾಪನೆ ಮಾಡುತ್ತಾರೆ. ಈ ಗೌರಿಗೆ ಹಿರೇಗೌರಿ ಎಂದು ಅಥವ ದೊಡ್ಡ ಗೌರಿ ಎಂದು ಹೆಸರಿದೆ. ದಿಕ್ಕು ನೋಡಿ ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಗೌರಿಯನ್ನು ಸ್ಥಾಪಿಸುತ್ತಾರೆ. ಒಂದು ಮಣೆ ಅಥವಾ ತಕ್ಕುವಾದ ಒಂದು ಪುಟ್ಟ ಮಂಟಪದಲ್ಲಿ ಕೂಡಿಸಿ ಮುಂದೆ ರಂಗವಲ್ಲಿ ಎರಡು ಬದಿಗಳಲ್ಲಿ ದೀಪಗಳನ್ನು ಇಡುತ್ತಾರೆ.

ಈ ಗೌರೀ ಪೂಜೆಯು ಎಲ್ಲರ ಮನೆಗಳಲ್ಲಿ ಇರುವುದಿಲ್ಲ, ಯಾರಮನೆಯಲ್ಲಿ ಪೂಜೆಯ ಸಂಪ್ರದಾಯವಿದೆಯೊ ಅವರು ಮನೆಯಲ್ಲಿ ಗೌರಿಯನ್ನು ಸ್ಥಾಪಿಸುತ್ತಾರೆ.

ಎಲ್ಲರ ಮನೆಯಲ್ಲಿ ಶಿವಪಾರ್ವತಿಯರ ಮಣ್ಣಿನ ವಿಗ್ರಹಗಳನಿಟ್ಟು ಅದರ ಎಡರುಗದೆ ಹತ್ತು ಮಣ್ಣಿನ ಉಂಡೆಗಳನ್ನಾಗಲೀ ಅಥವಾ ಗೋಪರದ ಆಕಾರದಲ್ಲಿ ಮಾಡಿ ಸಾಲಾಗಿ ಇಡುತ್ತಾರೆ. ಬಹುಶಃ ಅದು ಗಣಗಳಿರಬಹುದು ಅಥವಾ ಪಾರ್ವತಿಯ ಸಾಖೀಗಣ ಇರಬಹುದು.

ವಿಗ್ರಹಯಿಲ್ಲದವರು ಶಿವಪಾರ್ವತಿಯರ ಫೋಟೋ ಇಟ್ಟು ಮುಂದೆ ಗಣಗಳನಿಟ್ಟು ಪೂಜಿಸುತ್ತಾರೆ.

ಹಳ್ಳಿಗಳಲ್ಲಿ ಜಾತಿ ಭೇದವಿಲ್ಲದೆ, ಯಾರ ಮನೆಗಳಲ್ಲಿ ಗೌರಿ ಸ್ಥಾಪಿಸಿರುತ್ತಾರೋ ಅವರ ಮನೆಗೆ ಆರತಿಗೆ ಹೋಗುತ್ತಾರೆ. ಹೆಣ್ಣು ಮಕ್ಕಳು ತಮ್ಮ ತಮ್ಮ ಮಕ್ಕಳುಗಳನ್ನು ಕರೆದುಕೊಂಡು, ತಟ್ಟೆಗಳಲ್ಲಿ ಹೂ ಹಾಗು ನೈವೇದ್ಯಕ್ಕೆ ಹಣ್ಣು ಅಥವಾ ಸಕ್ಕರೆ ತಟ್ಟೆಗಳಲ್ಲಿ ಹಿಟ್ಟಿನ ಆರತಿ ಹಿಂದೆ ವಿಧವಿಧವಾದ ಸಕ್ಕರೆ ಅಚ್ಚುಗಳನ್ನಿಟ್ಟುಕೊಂಡು ಸಾಯಂಕಾಲ ಆ ತಾಯಿಗೆ ಪೂಜೆ ನೈವಿದ್ಯ ಸಲ್ಲಿಸಿ ಆರತಿ ಮಾಡಿಕೊಂಡು ಬರುತ್ತಾರೆ.

ಶುಧ್ಧ ನವಮಿಯಿಂದ ಹುಣ್ಣಿಮೆಯವರೆಗೆ ಈ ಪೂಜೆ ನಡೆಯುತ್ತದೆ. ಗೌರೀ ಸ್ಥಾಪಿಸಿದವರು ಮರುದಿವಸ ಪೂಜೆಮಾಡಿ ವಿಸರ್ಜಿಸಿ ಕೆರೆಗಳಿಗೊ, ಭಾವಿಗೂ ದೇವರನ್ನು ವಿಸರ್ಜನೆ ಮಾಡುತ್ತಾರೆ.

For festival food recipes click here.

For festival snacks and drinks recipes click here.  

Related Images:

Related Post