Hiranya Kashyapa Samhara

Hiranya Kashyapa Samhara

ಹಿರಣ್ಯ ಕಶ್ಯಪ ಸಂಹಾರ

ಧೈರ್ಯಮಾಡಿ ದೈತ್ಯ ಹರಿಯ ಚರ್ಯ ನೋಡಿದಾ।।
ಶೌರ್ಯದಿಂದ ಯುದ್ದವೆಂಬೊ ಕಾರ್ಯ ಮಾಡಿದಾ।।೧।।

ಗದೆಯ ಕೈಯಲ್ಹಿಡಿದು ಹರಿಯ ಎದೆಗೆ ಹೊಡೆದನು।।
ಗದೆಯು ಸಹಿತ ಕೈಯ ಹರಿಯು ವದಗಿ ಹಿಡಿದನು।।೨।।

ಬಿಡಿಸಿಕೊಂಡು ಬೇಗ ದೈತ್ಯ ನಡೆದ ಹಿಂದಕೆ।।
ಖಡುಗ ಚರ್ಮ ಹಿಡಿದು ಬಂದು ನಡೆದ ಮುಂದಕೆ।।೩।।

ಸೊಕ್ಕಿನಿಂದ ಬರುವ ಅವನ ತೆಕ್ಕಿಲ್ಹಿಡಿದನು।।
ತಕ್ಕವಾಗಿರುವ ಹೊಸ್ಥಿಲಕ್ಕೆ ನಡೆದನು।।೪।।

ಅಲ್ಲೆ ಅವನ ಭಾರ ತೊಡೆಗಳಲ್ಲಿ  ತಾಳಿದ।।
ಎಲ್ಲ ನಖಗಳಿಂದ ಹೃದಯದಲ್ಲಿ ಸೀಳಿದ।।೫।।

ಕರುಳ ಬಗೆದು ಮಾಲೆಮಾಡಿ ಕೊರಳಿಗ್ಹಾಕಿದ।।
ದುರುಳನನ್ನು ಕೊಂದು ಎಲ್ಲ ಸರಳ ಮಾಡಿದ।।೬।।

ಸೃಷ್ಟಿಕತ್ರು ಮೊದಲು ಮಾಡಿ ಅಷ್ಟ ವಿಬುಧರು।।
ಸ್ಪಷ್ಟವಾಗಿ ಸ್ತುತಿಸಿ ಪುಷ್ಪಿವೃಷ್ಟಿ ಕರೆದರು।।೭।।

ಜಯ ಜಯೆಂದು ಶಬ್ದಮಾಡಿ ಜಯವ ಪಡೆದರು।।
ಭಯ ನಿವಾರಣನ ದಯದಿ ಭಯವ ಕಳೆದರು।।೮।।

ದೇವ ದುಂದು ಭೀಗಳ್ಹರುಷ ಭಾವದಿಂದಲಿ।।
ಕೇವಲಾಗಿ ನುಡಿದವಾಗ ತೀವ್ರದಿಂದಲಿ।।೯।।

ಘನತರಾದ ಗಂಧರ್ವರೆನಿಪರೆಲ್ಲರೂ।।
ಮನಕೆ ಹರುಷವಾದ ಗಾಯನವ ಮಾಳ್ಪರು।।೧೦।।

ನ್ರಿತ್ಯಮಾಡಿದರು ಸ್ತ್ರೀಯರೆತ್ನದಿಂದಲಿ।।
ಮತ್ತೆ ಸಂಗೀತ ಸಾಹಿತ್ಯದಿಂದಲಿ।।೧೧।।

ನಾರಸಿಂಹ ಮೂರ್ತಿ ನೋಡಲಾರರೆಲ್ಲರು ।।
ಘೋರರೂಪ ಕಂಡ ದೂರ ದೂರ ನಿಂತರ।।೧೨।।

ಭ್ರಾಂತರಾದರೆಲ್ಲ ಎನಥ್ಹೆಂಥ ಭಕ್ತರು ।।
ಸಂತತಾನಂತಾದ್ರೀಶ ನಂತ ತಿಳಿಯರು।।೧೩।।

ಕವಿ ಅನಂತಾಚಾರ್ಯರು ಬರೆದ ಪ್ರಲ್ಹಾದ ಚರಿತ್ರೆ ಹಾಡಿನ ಪುಸ್ತಕದಿಂದ ತೆಗೆದುಕೊಂಡಿದ್ದು.

Hiranya Kashyapa Samhara is the song from Prahalada Charitre written by Ananthachaaryaru.

Happy Narasimha Jayanthi!

Related Images:

Related Post